Stock Market ನೀವು ಸ್ಟಾಕ್​ ಮಾರ್ಕೆಟ್​ಗೆ ಹೊಸಬರೇ?; ಇಂಟ್ರಾಡೇ ಟ್ರೇಡಿಂಗ್ ಆರಂಭಿಸಲು ಮಾಹಿತಿ ಇಲ್ಲಿದೆ



ನಿಮಗೆ ಗೊತ್ತಾ ಕೇವಲ ಭಾರತದ ಜನಸಂಖ್ಯೆಯಲ್ಲಿ ಶೇಕಡಾ 2-3 ರಷ್ಟು ಜನರು ಮಾತ್ರ ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆ ಮಾಡಿದ್ದಾರೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಭಾರತೀಯರಿಗೆ ಷೇರು ಮಾರುಕಟ್ಟೆ ಅಪಾರ ಸಂಪತ್ತನ್ನು ಸೃಷ್ಟಿಸಿದೆ. ಆದರೆ ಹೂಡಿಕೆ ಮಾಡಲು ಹಿಂಜರಿಯುವ ಜನರು ಈ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಸ್ಟಾಕ್​ ಮಾರ್ಕೆಟ್​ ಎಂದ ಕೂಡಲೇ ಹಲವಾರು ಕಾರಣಗಳಿಂದ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಆದರೆ ಷೇರು

ಮಾರುಕಟ್ಟೆಯ ಬಗ್ಗೆ ಆಳವಾದ ಅರಿವಿಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.


ಸ್ಟಾಕ್​ ಮಾರ್ಕೆಟ್​ ಟ್ರೇಡಿಂಗ್ ನಿಮ್ಮ ಲೆಕ್ಕಾಚಾರದ ನಡೆಯನ್ನು ಬಯಸುತ್ತದೆ. ಮಾರ್ಕೆಟ್​ ಮೇಲೆ ಸದಾ ನಿಮ್ಮ ಹದ್ದಿನ ಕಣ್ಣನ್ನು ಅಪೇಕ್ಷಿಸುತ್ತದೆ. ಜೊತೆಗೆ ಸರಿಯಾದ ಸಮಯಕ್ಕೆ ಕೊಳ್ಳುವ ಮತ್ತು ಮಾರುವ ನಿರ್ಧಾರವನ್ನು ನೀವು ಮಾಡುವುದನ್ನು ನಿರೀಕ್ಷಿಸುತ್ತದೆ. ನೀವು ಸ್ಟಾಕ್​ ಮಾರ್ಕೆಟ್​ಗೆ ಹೊಸಬರಾಗಿದ್ದರೆ ಇನ್​ಟ್ರಾ ಡೇ ಟ್ರೇಡಿಂಗ್ ಆರಂಭಿಸಲು ಬಯಸುತ್ತಿದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ.

ಇನ್​ಟ್ರಾ ಡೇ ಟ್ರೇಡಿಂಗ್ ಅಂದರೇನು?


ಇನ್​ಟ್ರಾ ಡೇ ಟ್ರೇಡಿಂಗ್ ಒಬ್ಬ ವ್ಯಕ್ತಿ ಮಾರುಕಟ್ಟೆಯ ಅವಧಿಯೊಳಗೆ ಸ್ಟಾಕನ್ನು ಒಂದೇ ದಿನದಲ್ಲಿ ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆಯಾಗಿದೆ. ಈ ವ್ಯಾಪಾರವೂ ಯಾವ ಮಾರುಕಟ್ಟೆಯಲ್ಲಿ ಬೇಕಾದರು ನಡೆಯಬಹುದು. ಆದರೆ ಸ್ಟಾಕ್ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಅಂದರೆ ಮಾರುಕಟ್ಟೆ ದಿನದ ವಹಿವಾಟು ಮುಕ್ತಾಯಗೊಳ್ಳುವುದರೊಳಗೆ ಮುಗಿಯುವ ಪ್ರಕ್ರಿಯೆಯಾಗಿರುತ್ತದೆ. ಈ ವಹಿವಾಟುಗಳು ಷೇರುಗಳ ಮಾಲೀಕತ್ವದ ಬದಲಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಇನ್​ಟ್ರಾ ಡೇ ಟ್ರೇಡಿಂಗ್​​ ಅನ್ನು ಡೇ ಟ್ರೇಡಿಂಗ್ ಎಂದೂ ಸಹ ಕರೆಯಲಾಗುತ್ತದೆ.

ವರ್ಗೀಕರಣ

ಇನ್​ಟ್ರಾ ಡೇ ಟ್ರೇಡಿಂಗ್​ ನಲ್ಲಿ ಹೂಡಿಕೆದಾರರು ಅಥವಾ ಟ್ರೇಡರ್ಸ್​​ ವ್ಯಾಪಾರದಲ್ಲಿ ಬಳಸುವ ಒಂದು ಶೈಲಿಯಾಗಿದೆ. ಕೆಲವು ನಿರ್ದಿಷ್ಟ ಪ್ರಮಾಣದ ಸ್ಟಾಕ್ಸ್​ ಖರೀದಿ ಮಾಡಲಾಗುತ್ತದೆ. ಆನಂತರ ಲಾಭಗೊಳಿಸುವ ಉದ್ದೇಶದಿಂದ ವಹಿವಾಟನ್ನು ಹಿಮ್ಮುಖಗೊಳಿಸಲಾಗುತ್ತದೆ. ಇಲ್ಲಿಯವರೆಗೂ ಬಹುತೇಕರು ಈ ವಹಿವಾಟನ್ನು ಹಣಕಾಸು ಸಂಸ್ಥೆ ಅಥವಾ ವೃತ್ತಿಪರ ವ್ಯಾಪಾರಿಗಳ ಕ್ಷೇತ್ರೆವೆಂದೇ ಭಾವಿಸಿದ್ದರು. ಎಲೆಕ್ಟ್ರಾನಿಕ್​ ಟ್ರೇಡಿಂಗ್​ನಿಂದ ಈ ಮನೋಭಾವ ಬದಲಾಗಿದೆ.


ಇನ್​ಟ್ರಾ ಡೇ ಟ್ರೇಡಿಂಗ್ ಮತ್ತು ರೆಗ್ಯೂಲರ್ ಟ್ರೇಡಿಂಗ್​ ನಡುವಿನ ವ್ಯತ್ಯಾಸಗಳು

ಷೇರುಗಳ ವಿತರಣೆಯಲ್ಲಿ ಈ ಎರಡರ ನಡುವೆ ವ್ಯತ್ಯಾಸವನ್ನು ಕಾಣಬಹುದು. ಇನ್​ಟ್ರಾ ಡೇ ಟ್ರೇಡಿಂಗ್​ನಲ್ಲಿ ಅದೇ ದಿನವೇ ನಿಮ್ಮ ಸ್ಥಾನಗಳನ್ನು ವರ್ಗಾವಣೆ ಮಾಡಬಹುದು. ನಿಮ್ಮ ಮಾರಾಟದ ಆರ್ಡರ್ ನಿಮ್ಮ ಕೊಳ್ಳುವ ಆರ್ಡರ್​ಗೆ ಸರಿದೂಗುತ್ತದೆ. ಈ ನಿಟ್ಟಿನಲ್ಲಿ ಮಾಲೀಕತ್ವದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಆದರೆ ರೆಗ್ಯೂಲರ್ ಟ್ರೇಡಿಂಗ್​ನಲ್ಲಿ ಒಂದಷ್ಟು ದಿನಗಳು ನಿಮ್ಮನ್ನು ಕಾಯಿಸಬಹುದು. ನೀವು ಮಾರಾಟ ಮಾಡಿದ ಶೇರ್​ಗಳು ನಿಮ್ಮ ಡೀ ಮ್ಯಾಟ್​ ಅಕೌಂಟ್​ನಿಂದ ಹೊರ ಹೋಗುವ ಸಮಯದಲ್ಲಿ ನೀವು ಕೊಂಡ ಶೇರುಗಳ ವಿತರಣೆಯಾಗುವುದು.


ಇನ್​ಟ್ರಾ ಡೇ ಟ್ರೇಡಿಂಗ್ ಯಾರಿಗೆ ಹೊಂದುತ್ತದೆ?

ರಿಸ್ಕ್​ ತೆಗೆದುಕೊಳ್ಳಲು ಸಿದ್ಧವಿರುವವರಿಗೆ, ಮಾರುಕಟ್ಟೆಯ ಬೆಳವಣಿಗೆಗಳನ್ನು ಕೂಲಂಕುಷವಾಗಿ ಗಮನಿಸಲು ಸಮಯವಿರುವವರಿಗೆ ಹೊಂದುವ ಟ್ರೇಡಿಂಗ್ ಇದಾಗಿರುತ್ತದೆ.


ಏನೆಲ್ಲಾ ರಿಸ್ಕ್​ ಒಳಗೊಂಡಿರುತ್ತದೆ?

ಇನ್​ ಟ್ರಾ ಡೇ ಟ್ರೇಡಿಂಗ್ ಅತಿ ಹೆಚ್ಚು ರಿಟರ್ನ್ಸ್ ನೀಡುವ ಭರವಸೆ ನೀಡುತ್ತದೆ. ಇದು ಸಖತ್ ಆಕರ್ಷಣೀಯ ಅನ್ನಿಸುತ್ತದೆ. ಆದರೆ ಡೆಲಿವರಿ ವಿಭಾಗದಲ್ಲಿ ಅತಿ ಹೆಚ್ಚು ರಿಸ್ಕ್​ ಒಳಗೊಂಡಿರುತ್ತದೆ. ನಿಮ್ಮ ಸಂಪೂರ್ಣ ಸಮಯವನ್ನು ಬೇಡುವ ಕೆಲಸ ನಿಮ್ಮದಾಗಿದ್ದಾರೆ ನೀವು ಇನ್​ಟ್ರಾ ಡೇ ಟ್ರೇಡಿಂಗ್​ ಮಾಡುವ ಮುನ್ನ ಪ್ಲಾನ್ ಮಾಡಿಕೊಳ್ಳಬೇಕು.


ಇನ್​ಟ್ರಾ ಡೇ ಟ್ರೇಡಿಂಗ್​ ಪ್ಲೇಸ್​ ಮಾಡುವುದು ಹೇಗೆ?

ರಿಸರ್ಚ್​ ಮತ್ತು ಟೆಕ್ನಿಕಲ್​ ಸಪೋರ್ಟ್ ನೀಡುವ ಸರಿಯಾದ ಬ್ರೋಕರ್ ಇದ್ದರೆ ಸುಲಭವಾಗಿ ಇನ್​ಟ್ರಾಡೇ ಟ್ರೇಡ್ ಮಾಡಬಹುದು. ಸರಿಯಾದ ಟೂಲ್ಸ್​ಗಳನ್ನು ಬಳಸಿಕೊಂಡು ಇಂಟ್ರಾಡೇ ಟ್ರೇಡ್​ ವಹಿವಾಟನ್ನು ವಿಸ್ತರಿಸಬಹುದಾಗಿದೆ. ಒಂದು ಟ್ರಾನ್ಸಾಕ್ಷನ್‌ಗೆ ಕಡಿಮೆ ಬ್ರೋಕರೇಜ್ ಇರುವ ಅಕೌಂಟ್​ ಆಯ್ಕೆ ಮಾಡುವುದು ಸೂಕ್ತ.


ಇನ್​ಟ್ರಾ ಡೇ ಟ್ರೇಡಿಂಗ್​ನಲ್ಲಿ ಯಾವ ರೀತಿಯ ಷೇರುಗಳನ್ನು ಆಯ್ಕೆ ಮಾಡಬೇಕು?

ಮಾರುಕಟ್ಟೆಯ ದಿನದ ವಹಿವಾಟಿನೊಳಗೆ ವರ್ಗಾವಣೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಹೆಚ್ಚು ಲಿಕ್ವಿಡಿಟಿ ಇರುವ ಸ್ಟಾಕ್ ಆಯ್ಕೆ ಮಾಡಬೇಕು. ಹೈ ಲಿಕ್ವಿಡ್ ಸ್ಟಾಕ್ , ಲಾರ್ಜ್ ಕ್ಯಾಪ್ ಸ್ಟಾಕ್ಸ್​​ಗಳನ್ನು ಹೆಚ್ಚು ಜನರು ಶಿಫಾರಸ್ಸು ಮಾಡುತ್ತಾರೆ. ಇದು ನಿಮ್ಮ ಷೇರುಗಳ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.


ಇನ್​ಟ್ರಾ ಡೇ ಟ್ರೇಡ್​ ಯಾವಾಗ ಮಾಡಬೇಕು?

ಮಾರುಕಟ್ಟೆಯ ಸಮಯವೇ ಸೂಕ್ತ ಸಮಯ. ಇದರಿಂದ ನಷ್ಟವನ್ನು ತಪ್ಪಿಸಬಹುದು. ಅನೇಕ ತಜ್ಞರು ಹೇಳುವ ಪ್ರಕಾರ ಟ್ರೇಡಿಂಗ್​ನ ಮೊದಲ ಒಂದು ಗಂಟೆಯೊಳಗೆ ಆರಂಭಿಸುವುದು ಸೂಕ್ತವಲ್ಲ.


ಇನ್​ಟ್ರಾ ಡೇ ಟ್ರೇಡಿಂಗ್ ಏಕೆ ಪರಿಗಣಿಸಬೇಕು?

1. ಹೂಡಿಕೆದಾರರಿಗಿಂತ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ

2. ಹೈ ರಿಟರ್ನ್ಸ್​​ ಸಾಮರ್ಥ್ಯ

3. ಕಡಿಮೆ ಬ್ರೋಕರೇಜ್​ ಶುಲ್ಕ

4. ಕಡಿಮೆಯಿಂದ ಮಧ್ಯಮ ಸ್ಟ್ರಾಟರ್ಜಿ


ಆದರೆ ನೆನಪಿಡಿ ಪ್ರತಿನಿತ್ಯ ಮಾರ್ಕೆಟ್ ವಿಶ್ಲೇಷಿಸಬೇಕು. ಜೊತೆಗೆ ಹೈ ರಿಸ್ಕ್​​ ತೆಗೆದುಕೊಳ್ಳಲು ಸಿದ್ಧರಿದ್ದರೆ ಇನ್​ಟ್ರಾ ಡೇ ಟ್ರೇಡಿಂಗ್ ನಿಮಗೆ ಹೊಂದುತ್ತದೆ.


ಇದನ್ನು ಪ್ರಾರಂಭಿಸುವುದು ಹೇಗೆ?

ಟ್ರೇಡಿಂಗ್​ ಮತ್ತು ಡೀಮ್ಯಾಟ್​​ ಅಕೌಂಟ್ ತೆರೆಯುವ ಮೂಲಕ ಪ್ರಾರಂಭವಾಗುತ್ತದೆ. ನೀವು ಸ್ಟಾರ್ಕ್​ ಮಾರುಕಟ್ಟೆಯಲ್ಲಿ ಈಗಾಗಲೇ ಹೂಡಿಕೆ ಮಾಡಿದ್ದರೆ ಇನ್​ಟ್ರಾ ಡೇ ಟ್ರೇಡಿಂಗ್​ಗಾಗಿ ಹೊಸ ಖಾತೆ ತೆರಯಬಹುದು. ಸರಿಯಾದ ಟೂಲ್ಸ್​ಗಳನ್ನು ಸೈನ್​ ಅಪ್ ಮಾಡಬಹುದು. ಇನ್​ ಟ್ರಾ ಡೇ ಟ್ರೇಡಿಂಗ್​ನಿಂದ ತೆರಿಗೆಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ.


ನಿಮ್ಮ ಬಳಿ ಅಗತ್ಯವಾದ ಟೂಲ್ಸ್ ಮತ್ತು ಅಕೌಂಟ್ ಇದ್ರೆ , ಪ್ರತಿದಿನ ಚಾರ್ಟ್​ಗಳನ್ನು ಗಮನಿಸುವುದು ನಿಮಗೆ ನೆರವಿಗೆ ಬರುತ್ತದೆ. ಅಲ್ಲೇ ಟೆಕ್ನಿಕಲ್ ಸಪೋರ್ಟ್ ಕೂಡ ನೆರವಿಗೆ ಬರುತ್ತದೆ. TradeSmart or KEAT ProX. ಟೆಕ್ನಿಕಲ್​ ಸಪೋರ್ಟ್​ಗೆ ಈ ಸಾಫ್ಟ್​ವೇರ್​ಗಳು ನೆರವಾಗುತ್ತವೆ.


ವ್ಯಾಲ್ಯೂ ಏರಿಯಾ ಮತ್ತು ಅದರ ಪ್ರಾಮುಖ್ಯತೆ

ಇನ್​ಟ್ರಾ ಡೇ ಟ್ರೇಡರ್ ಆಗುವ ಮೂಲಕ ನೀವು ಮಾರುಕಟ್ಟೆಯ ನಿರ್ದೇಶನಗಳನ್ನು ಬೇಗನೇ ಗ್ರಹಿಸಬೇಕು. 'value area' ಗಳನ್ನು ಗುರುತಿಸುವುದು ಬಹಳ ಮುಖ್ಯವಾಗುತ್ತದೆ. ಇದು ಸೂಕ್ತ ನಿರ್ಧಾರಕ್ಕೆ ನೆರವಾಗುತ್ತದೆ. ತಜ್ಞರು ಇದನ್ನು '80% ನಿಯಮ' ಎಂದು ಕರೆಯುತ್ತಾರೆ. ವಾಲ್ಯೂ ಏರಿಯಾವು ಹಿಂದಿನ ದಿನದ ವ್ಯಾಪಾರದ ಕನಿಷ್ಠ ಶೇಕಡಾ 70 ರಷ್ಟು ಬೆಲೆಯ ಶ್ರೇಣಿಯಾಗಿರುತ್ತದೆ. ಇದನ್ನು ಗುರುತಿಸಿದರೆ ಬೆಲೆಯ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುತ್ತದೆ.


ಒಂದು ವೇಳೆ ಮೊದಲ ಒಂದು ಗಂಟೆಯಲ್ಲಿ ಬೆಲೆಯೂ ಶ್ರೇಣಿಗಿಂತ ಕೆಳಗಿದ್ದರೆ ಇದು ಏರಿಕೆಯಾಗಲು ಶೇಕಡಾ 80 ರಷ್ಟು ಅವಕಾಶವಿರುತ್ತದೆ. ಒಂದು ವೇಳೆ ಮೊದಲ ಒಂಟು ಗಂಟೆಯಲ್ಲಿ ಶ್ರೇಣಿಗಿಂತಲೂ ಮೇಲಿದ್ದರೆ ಆಗ ಬೆಲೆ ಬೀಳುವ ಸಂಭವವೂ ಇದೆ.

ಸ್ಟಾಕ್​ ಮೇಲೆ ಬಂದು ಅಲ್ಲಿಯೇ ಉಳಿದರೆ ನೀವು ಅಲ್ಲಿಯೇ ವ್ಯಾಲ್ಯೂ ಏರಿಯಾದಲ್ಲಿ ನಿಮ್ಮ ಸ್ಥಾನವನ್ನು ತೆಗೆದುಕೊಳ್ಳಬಹುದು. ಇದು ಇನ್​ಟ್ರಾ ಡೇ ಟ್ರೇಡಿಂಗ್ ನ ಮೂಲ ತಂತ್ರಗಾರಿಕೆ. ಹಾಗೆಯೇ ವ್ಯಾಲ್ಯೂ ಏರಿಯಾಗಿಂತ ಕೆಳಗೆ ಆರಂಭವಾದರೆ ವ್ಯಾಲ್ಯೂ ಏರಿಯಾದಲ್ಲಿ ದೀರ್ಘ ಸ್ಥಾನವನ್ನು ತೆಗೆದುಕೊಳ್ಳಬಹುದು.


ಇವೆಲ್ಲವೂ ಥಂಬ್​ ನಿಯಮಗಳಾಗಿವೆಯಷ್ಟೇ ತಜ್ಞರ ಶಿಫಾರಸುಗಳಲ್ಲ. ಕಡೆಯದಾಗಿ ಸ್ಟಾಪ್​ ಲಾಸ್ ಕವರ್ ಸೆಟ್ ಮಾಡುವುದನ್ನು ಮರೆಯಬೇಡಿ..

Post a Comment

0 Comments